About Me

My photo
contact: off-2674 mob-9538231750

Tuesday, September 1, 2009

SAKATH SACCHI ENTRY.

ಮೇನಕೆ ವಿಶ್ವಾಮಿತ್ರ :


ಮೇನಕೆ ಕಣ್ಣಲಿ ಬಿಟ್ಟಳು ಮಾದಕ ಅಸ್ತ್ರ
ಅದ ತಡೆಯದಾದ ತಪಸಿ ವಿಶ್ವಾಮಿತ್ರ

ಸಡಿಲವಾಯಿತವನ ಏಕಾಗ್ರತೆಯ ಸೂತ್ರ
ಅವ ಕಣ್ತೆರೆಯಲು ಕಾಣಿಸಿತವಳ ಸುಂದರ ಚಿತ್ರ

ಬೆರೆತವವರೀರ್ವರ ಅತ್ಯಾಸೆ ತುಂಬಿದ ನೇತ್ರ
ಬರೆಯುತ ಉನ್ಮಾದದಿಂದೊಲವಿನ ಪತ್ರ

ಅವರ ಒಡಲಾಯಿತು ಮದನನ ಕ್ಷೇತ್ರ
ಹೃದಯಗಳು ಪಟಿಸಿದವು ಮಿಲನದ ಸ್ತೋತ್ರ

ನಾಚಿಸಿದರವರು ಕಾಮಶಾಸ್ತ್ರ
ಜಗದ ಪರಿವಿಲ್ಲದೆ ವಹಿಸುತ ರತಿಮನ್ಮತರ ಪಾತ್ರ

ಪ್ರೇಮಕಾಮಾಕೆ ಅಡ್ಡಿಯಾಗದು ಕುಲಗೋತ್ರ
ಈ ನಿಯಮವಿರುವುದು ಪ್ರೇಮಕಾಮಾಕೆ ಮಾತ್ರ

--------ಸಕ್ಕತ್ ಸಚ್ಚಿ

ಹಾಯ್ ಗೆಳೆಯರೇ ,
ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಸಚಿವಾಲಯದ ಹೀರೋ,ಸಕ್ಕತ್ ಸಚ್ಚಿಯವರು ನಮ್ಮ ಬ್ಲಾಗಿಗೆ ತಮ್ಮದೇ ಶೈಲಿಯ ಕವನದ ಮೂಲಕ ಸೂಪರ್ ಎಂಟ್ರಿ ಕೊಡ್ತಾ ಇದ್ದಾರೆ.please welcome him.

Blogs I Follow