
ಪ್ರಿಯ ಗೆಳೆಯರೇ,ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಷಯಗಳು.ಈ ಸಂಕ್ರಾಂತಿಯು ನಿಮ್ಮ ಜೀವನದಲ್ಲಿ ಸುಗ್ಗಿ ತರಲಿ ಎಂದು ಹಾರೈಸುತ್ತೇನೆ.ಸಂಕ್ರಾಂತಿ ಅಕ್ಷರಶಃ ನಮ್ಮ ರೈತಾಪಿ ಜನಾಂಗದ ಹಬ್ಬ.ಶ್ರಮದಿಂದ ಗಳಿಸಿದ ಫಲವನ್ನು ಉಣ್ಣುವ ಹಬ್ಬ.ನಗರದ ಜನತೆಗೆ ಎಳ್ಳು ಬೆಲ್ಲ ಹಂಚುವ ಸಂಭ್ರಮವಾದರೆ, ಗ್ರಾಮೀಣ ಭಾಗದ ಜನರ ಸಂಭ್ರಮವೇ ಬೇರೆ ರೀತಿಯದು. ಎತ್ತಿಗೆ ಸಿಂಗಾರ ಮಾಡುವುದು,ಬೆಳೆದ ಧಾನ್ಯಗಳ ರಾಶಿ ಹಾಕಿ ಪೂಜೆ ಸಲ್ಲಿಸುವುದು ಪ್ರಮುಖ ಆಕರ್ಷಣೆ.ದೇಶದಾದ್ಯಂತ ವಿವಿಧ ಹೆಸರುಗಳಲ್ಲಿ ಆಚರಿಸುವ ಸಮಸ್ತರಿಗೂ ಸಂಕ್ರಾಂತಿ ಹಬ್ಬಕ್ಕೆ ಗೆಳೆಯರ ಅಂಗಳದ ಶುಭಾಷಯಗಳು.ಮತ್ತು ಈ ಸಂಕ್ರಾಂತಿಯಿಂದ ನಮ್ಮ ಬ್ಲಾಗ್ ಒಂದು ಹೊಸ ಹುರುಪಿನೊಂದಿಗೆ ನಿಮ್ಮ ಮುಂದೆ ಬರಲಿದೆ.ಇದಕ್ಕೆ ನಿಮ್ಮ ಬೆಂಬಲ ಸದಾ ಇರುತ್ತದೆಂದು ನಂಬಿರುತ್ತೇನೆ.ಇಂತಿ ನಿಮ್ಮ ಗೆಳೆಯ ಮಂಜುದಾದಾ.