
ಬೆಚ್ಚದಿರು ಕೋಮಲ ಬಾಲೆ
ನಮ್ಮದು ನಿಷ್ಕಪಟ ಪ್ರೇಮಲೀಲೆ
ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ
ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ
ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ
ಪ್ರತಿ ಮಾತು ಸಿಹಿಯಾದ ಸಾಲೆ
ಪ್ರತಿ ಮುತ್ತು ಜೇನ್ಬೆರೆತ ಹಾಲೆ
ಪ್ರತಿ ಮುತ್ತು ಜೇನ್ಬೆರೆತ ಹಾಲೆ
ಹೃದಯದ ಮಿಡಿತವೆ ಪ್ರೀತಿಯ ಓಲೆ
ಅದ ಓದುತ್ತಿದೆ ಹೃದಯದ ಮೂಲೆಮೂಲೆ
ಅದ ಓದುತ್ತಿದೆ ಹೃದಯದ ಮೂಲೆಮೂಲೆ
ನಿಮಿಷನಿಮಿಷವು ಓಡುವ ಕಾಲೆ
ಹರುಷಹರುಷ ಆಡಿಸುತ್ತಿದೆ ಕೋಲು ಕೋಲಣ್ಣ ಕೋಲೆ
ಹರುಷಹರುಷ ಆಡಿಸುತ್ತಿದೆ ಕೋಲು ಕೋಲಣ್ಣ ಕೋಲೆ
ಒಬ್ಬರಿಗಾಗಿ ಒಬ್ಬರು ಸೋಲೆ
ಗೆಲುವು ಅವರವರ ಪಾಲೆ
ಗೆಲುವು ಅವರವರ ಪಾಲೆ
ಜಗವ ಮರೆಯುವ ಬಾರೆ ಗುಣಶೀಲೆ
ಆಡುತ ಒಲವಿನುಯ್ಯಾಲೆ
ಆಡುತ ಒಲವಿನುಯ್ಯಾಲೆ
ಒಂದಾಗುವ ಬಳಿ ಬಾರೆ ಲೋಲೆ
ಹಾಡುತ ಸುವ್ವಿ ಸುವ್ವಾಲೆ
ಹಾಡುತ ಸುವ್ವಿ ಸುವ್ವಾಲೆ
ಅನುಮಾನಿಸಿದರೆ ಸುಮ್ಮನೆ ತಲೆ ಶೂಲೆ
ಅನುಮಾನ ಬೇಡ, ನಮ್ಮದೆರಡು ದೇಹವಾದರು ಒಂದೇ ಸೂಲೇ
ಅನುಮಾನ ಬೇಡ, ನಮ್ಮದೆರಡು ದೇಹವಾದರು ಒಂದೇ ಸೂಲೇ
ನಮ್ಮ ನಂಟು ಕೀಳಲಾಗದ ನೂಲೆ
ಬಾ ತೊಡಿಸುವೆ ನಿನಗೆ ತಾಳಿ ಹೂಮಾಲೆ
ಬಾ ತೊಡಿಸುವೆ ನಿನಗೆ ತಾಳಿ ಹೂಮಾಲೆ
ನವಜೀವನದ ಸವಿಯ ಸವಿಯೋಣ ಆಮೇಲೆ
ಚಿಮ್ಮಲು ಬಯಕೆಗಳು ಮೇಲೆ ಮೇಲೆ
ಚಿಮ್ಮಲು ಬಯಕೆಗಳು ಮೇಲೆ ಮೇಲೆ
---------------------------------
ಸಕತ್ ಸಚ್ಚಿ
ಯಾವನ್ರೀ ಅವನು.. ಕಿತ್ತೋಗಿರೋ ಕವಿ ...
ReplyDeleteThis blog is remarkable Than you for sharing your thought with us. i am always reader of your blog because more informative
ReplyDeleteand more interesting. Also details are providing in this blog.Fantasypower11 is online gaming platform on which you
play and wine real huge amount on daily basis. cricket online games
play cricket online